Indian western Railway recruitment 2022||Applications arebinvited for 3612 posts

- June 03, 2022

ರೈಲ್ವೆ ಇಲಾಖೆಯಲಿ 
ಭರ್ಜರಿ ಉದ್ಯೋಗಾವಕಾಶ: 3612 ಹುದ್ದೆಗಳಿಗೆ ಅರ್ಜಿ ಆಹ್ವಾನ‌‌

Large job opportunities in Railways: Applications are invited for 3612 posts‌‌

Western Railway Jobs: The Western Railway Recruitment Division has just released a new employment notification. Railway job aspirants know the following information and apply online.‌‌

Highlights

• ವೆಸ್ಟರ್ನ್‌ ರೈಲ್ವೆಯಲ್ಲಿ ಉದ್ಯೋಗ.

• 3612 ಹುದ್ದೆಗಳಿಗೆ ಅರ್ಜಿ ಆಹ್ವಾನ.

• ಅರ್ಜಿಗೆ ಜೂನ್ 27 ಕೊನೆ ದಿನ.‌‌

ರೈಲ್ವೆ ನೇಮಕಾತಿ ವಿಭಾಗ, ಪಶ್ಚಿಮ ರೈಲ್ವೆ, ಮುಂಬೈ ಇಲ್ಲಿ ಅಗತ್ಯ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಹಾಕಿರಿ. ಅರ್ಜಿಗೆ ಜೂನ್ 27 ಕೊನೆ ದಿನವಾಗಿದೆ. ನಂತರ ಆನ್‌ಲೈನ್‌ ಮೂಲಕ ಅರ್ಜಿಗೆ ಅವಕಾಶ ಇರುವುದಿಲ್ಲ. ವಿದ್ಯಾರ್ಹತೆ, ಪ್ರಮುಖ ಇತರೆ ಮಾಹಿತಿಗಳು ಈ ಕೆಳಗಿನಂತಿವೆ.

ಉದ್ಯೋಗ ಇಲಾಖೆ : ಭಾರತೀಯ ರೈಲ್ವೆ

ಹುದ್ದೆಗಳ ಹೆಸರು : ಅಪ್ರೆಂಟಿಸ್ ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ : 3612

ಟ್ರೇಡ್‌ವಾರು ಅಪ್ರೆಂಟಿಸ್ ಹುದ್ದೆಗಳ ವಿವರ

Short Description for RRC Western Railway Recruitment 2022 
OrganizationRailway Recruitment Cell (RRC)
PostsApprentice
Total Posts3612
Start date of Submission 28th May 2022
Last date of Submission 27th June 2022
Eligibility10th pass
Selection ProcessMerit-Based
Category Railway Jobs
Official websitehttps://www.rrc-wr.com/

ಫಿಟ್ಟರ್ : 941

ವೆಲ್ಡರ್ : 378

ಕಾರ್ಪೆಂಟರ್: 221

ಪೇಂಟರ್: 213

ಡೀಸೆಲ್ ಮೆಕ್ಯಾನಿಕ್ : 209

ಮೆಕ್ಯಾನಿಕ್ ಮೋಟಾರ್ ವೆಹಿಕಲ್: 15

ಇಲೆಕ್ಟ್ರೀಷಿಯನ್ : 639

ಇಲೆಕ್ಟ್ರಾನಿಕ್ ಮೆಕ್ಯಾನಿಕ್ : 112

ವೈಯರ್‌ಮೆನ್ : 14

ರೆಫ್ರಿಜೆರೇಟರ್ (ಎಸಿ-ಮೆಕ್ಯಾನಿಕ್): 147

ಪೈಪ್ ಫಿಟ್ಟರ್: 186

ಪ್ಲಂಬರ್: 126

ಡ್ರಾಫ್ಟ್‌ಮನ್ (ಸಿವಿಲ್): 88

ಪಿಎಎಸ್ಎಸ್‌ಎ: 252

ಸ್ಟೆನೋಗ್ರಾಫರ್ : 08

ಮೆಕ್ಯಾನಿಸ್ಟ್‌ : 26

ಟರ್ನರ್ : 37

ವಿದ್ಯಾರ್ಹತೆ (Eligibility Criteria) 

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಜತೆಗೆ ಐಟಿಐ ವಿದ್ಯಾರ್ಹತೆ ಸರ್ಟಿಫಿಕೇಟ್‌ ಅನ್ನು NCVT / SCVT ಇಂದ ಪಡೆದಿರಬೇಕು. ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ ಪಡೆದವರು, ಆಯಾ ಟ್ರೇಡ್‌ಗೆ ಅರ್ಜಿ ಹಾಕಬೇಕು.

ವಯಸ್ಸಿನ ಅರ್ಹತೆಗಳು

ಕನಿಷ್ಠ 15 ವರ್ಷ ಆಗಿರಬೇಕು.

ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

ಕೇಂದ್ರ ಸರ್ಕಾರದ ಅಪ್ರೆಂಟಿಸ್ ನಿಯಮಗಳ ಪ್ರಕಾರ ಜಾತಿವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಸಲ್ಲಿಕೆ ಹೇಗೆ?

- ಪಶ್ಚಿಮ ರೈಲ್ವೆ ನೇಮಕಾತಿ ವಿಭಾಗದ ಅಪ್ಲಿಕೇಶನ್‌ ವೆಬ್‌ ವಿಳಾಸ https://www.rrc-wr.com/TradeApp/Login ಕ್ಕೆ ಭೇಟಿ ನೀಡಿ.

- ಓಪನ್ ಅದ ಪೇಜ್‌ನಲ್ಲಿ ಮೊದಲಿಗೆ ರಿಜಿಸ್ಟ್ರೇಷನ್‌ ಪಡೆಯಿರಿ.

- ನಂತರ ಮತ್ತೆ ಸದರಿ ವೆಬ್‌ಪೇಜ್‌ನಲ್ಲಿ ಲಾಗಿನ್‌ ಆಗಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡುವ ಮೂಲಕ ಅಪ್ಲಿಕೇಶನ್‌ ಪೂರ್ಣಗೊಳಿಸಿ.

ಆನ್‌ಲೈನ್‌ ಮೂಲಕ ಅರ್ಜಿಯನ್ನು ಜೂನ್ 27, 2022 ರ ಸಂಜೆ 05 ಗಂಟೆವರೆಗೆ ಸಲ್ಲಿಸಬಹುದು. 

ಅಪ್ಲಿಕೇಶನ್‌ ಶುಲ್ಕ ವಿವರ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.100.

ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಆಯ್ಕೆ ಮಾಡಲಾಗುತ್ತದೆ.

 ರೈಲ್ವೆ ಅಧಿಕೃತ ವೆಬ್‌ಸೈಟ್‌ : click here

Indian western Railway recruitment 2022||Applications arebinvited for 3612 posts


EmoticonEmoticon

 

Start typing and press Enter to search