2022-23ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ / ಕೆ.ಎ.ಎಸ್ / ಗ್ರೂಪ್ - ಸಿ / ಬ್ಯಾಂಕಿಂಗ್ / ಎಸ್.ಎಸ್.ಸಿ / ಆರ್.ಆರ್.ಬಿ ಮತ್ತು ನ್ಯಾಯಾಂಗ ಸೇವಾ ಪರೀಕ್ಷೆಗಳ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್ - ಲೈನ್ ಮೂಲಕ ಅರ್ಜಿ ಆಹ್ವಾನಿಸಿರುವ ಬಗ್ಗೆ!
ಯಾರು ಅರ್ಜಿಯನ್ನು ಸಲ್ಲಿಸಬಹುದು?
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಆದಾಯದ ಮಿತಿ! ಹಾಗೂ ಅರ್ಹತೆಗಳು!
ಅಭ್ಯರ್ಥಿಗಳು ಕರ್ನಾಟಕದ ನಿವಾಸಿಯಾಗಿರಬೇಕು. ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ 5,00,000 ದ ಒಳಗಿರಬೇಕು.
ಯಾವ ಯಾವ ತರಬೇತಿ ನೀಡಲಾಗುವುದು? ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ / ಕೆ.ಎ.ಎಸ್ / ಗ್ರೂಪ್ - ಸಿ / ಬ್ಯಾಂಕಿಂಗ್ / ಎಸ್.ಎಸ್.ಸಿ / ಆರ್.ಆರ್.ಬಿ ಗಳಿಗೆ ಪರೀಕ್ಷಾ ಪೂರ್ವ ತರಬೇತಿ.
ಅರ್ಜಿಯನ್ನು ಸಲ್ಲಿಸುವ ವಿಳಾಸ: sw.kar.nic.in ನಲ್ಲಿ ಸಲ್ಲಿಸಬೇಕು.
ಆಯ್ಕೆ ಮಾಡುವ ವಿಧಾನ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಅಂಕದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/09/2022
ಸೂಚನೆ: ಪ್ರವೇಶ ಪತ್ರ ವಿತರಣೆ, ಪರೀಕ್ಷಾ ದಿನಾಂಕ, ತರಬೇತಿ ಸಂಸ್ಥೆಯ ಆಯ್ಕೆ ಹಾಗೂ ಕೌನ್ಸಿಲಿಂಗ್ ಮೊದಲಾದ ಮಾಹಿತಿಯನ್ನು sw.kar.nic.in ನಲ್ಲಿ ಕಾಲಕಾಲಕ್ಕೆ ಪ್ರಕಟಿಸಲಾಗುವುದು. ಯಾವುದೇ ಪತ್ರ ವ್ಯವಹಾರ ಇರುವುದಿಲ್ಲ.
EmoticonEmoticon