Karnataka State Open University invites applications for various admissions!

- January 19, 2023

 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿವಿಧ ಪ್ರವೇಶಾತಿಗಳಿಗೆ ಅರ್ಜಿ ಆಹ್ವಾನ!

ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 



ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು , ವಿದ್ಯಾರ್ಥಿಗಳು ಶಿಕ್ಷಣಕ್ರಮಗಳಿಗೆ ವಿವಿಯ ಅಂತರ್ಜಾಲದಲ್ಲಿರುವ ಅಡ್ಮಿಷನ್ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಆಯಾ ಶಿಕ್ಷಣಕ್ರಮಗಳಿಗೆ ನಿಗಲಪಡಿಸಿರುವ ಶೈಕ್ಷಣಿಕ ಅರ್ಹತೆಯನುಸಾರ ದಾಖಲಾತಿಗಳೊಂದಿಗೆ ವಿವಿ ನಿಲಯದ ಕೇಂದ್ರ ಕಚೇಲ ಮೈಸೂರು , ವಿವಿಧ ಪ್ರಾದೇಶಿಕ ಕೇಂದ್ರಗಳು ಮತ್ತು ಕಲಿಕಾರ್ಥಿ ಸಹಾಯ ಕೇಂದ್ರಗಳಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿದೆ.

ಆಯಾ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರ , ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆ , ವಿದ್ಯಾರ್ಥಿಗಳು ಸಲ್ಲಿಸಬೇಕಿರುವ ಶೈಕ್ಷಣಿಕ ಮತ್ತು ಇತರೆ ದಾಖಲಾತಿಗಳು , ಹಾಗೂ ಶುಲ್ಕಗಳ ವಿವರಗಳ ಅಯಾ ಶಿಕ್ಷಣಕ್ರಮಗಳ ವಿವರಣಾ ಪುಸ್ತಕ ( ಪ್ರಾಸ್‌ಪೆಕ್ಟಸ್ ) ಹಾಗೂ ಪ್ರೋಗ್ರಾಮ್ ಗೈಡ್‌ನಲ್ಲಿದ್ದು ಅವು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ Www.ksoumysuru.ac.in ನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ವಿವರಣಾ ಪುಸ್ತಕದಲ್ಲಿ ಸೂಚಿಸಿ ರುವ ನಿರ್ದೇಶನಗಳನ್ವಯ ತಮಗೆ ಹತ್ತಿರವಿರುವ ಪ್ರಾದೇಶಿಕ ಕೇಂದ್ರಗಳಲ್ಲಿ / ಕಲಕಾರ್ಥಿ ಸಹಾಯ ಕೇಂದ್ರಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ.


ಈಗಾಗಲೇ ಪ್ರಥಮ / ದ್ವಿತೀಯ ಸಾಲಿನ ಯುಜಿ/ ಪಿಜ ಶಿಕ್ಷಣಕ್ರಮವನ್ನು ಪೂರೈಸಿ , ನಾನಾ ಕಾರಣಗಳಿಗಾಗಿ ವಿದ್ಯಾಭ್ಯಾಸವನ್ನು ಪೂರ್ಣಗೊಆಸಿಕೊಂಡಿಲ್ಲದ ವಿದ್ಯಾರ್ಥಿಗಳು ವಿವಿ ನಿಲಯದ ನಿಯಮಗಳನುಸಾರ ದ್ವಿತೀಯ / ತೃತೀಯ ಯುಜಿ / ಪಿಜಿ ಶಿಕ್ಷಣಗಳಿಗೆ ನೇರ ಪ್ರವೇಶಾತಿ ಪಡೆಯಬಹುದಾಗಿದೆ .


ಪ್ರವೇಶಾತಿಯ ದಿನಾಂಕ : 17-01-2023 ರಿಂದ ಆನ್‌ಲೈನ್ ಮೂಲಕ ಪ್ರಾರಂಭವಾಗಲಿದ್ದು , ದಿನಾಂಕ : 31-03-2023 ರವರೆಗೂ ಪ್ರವೇಶಾತಿಗೆ ಅವಕಾಶವಿರುತ್ತದೆ.


 ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳು ಮತ್ತು ಕಲಿಕಾರ್ಥಿ ಸಹಾಯ ಕೇಂದ್ರಗಳ ವಿವರ ಮತ್ತು ವಿಳಾಸ , ದೂರವಾಣಿ ಸಂಖ್ಯೆಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ Www.ksoumysuru.ac.in , ನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in , ಅನ್ನು ಅಥವಾ ಸಹಾಯವಾಣಿ ಸಂಖ್ಯೆ : 8690544544 1 8800335638 ಅಥವಾ ಇ.ಮೇಲ್ techsupport@ksouportal.com ಅಥವಾ ಕೇಂದ್ರ ಕಚೇಲ 0821-2519941 / 43 / 48 / 52 Extn : ಮೈಸೂರು ದೂರವಾಣಿ ಸಂಖ್ಯೆ : 0821-2500981 , 313/315/317 ಅಥವಾ ಆಯಾ ಪ್ರಾದೇಶಿಕ ಕೇಂದ್ರಗಳು  ಕಕಾರ್ಥಿ ಸಹಾಯ ಕೇಂದ್ರಗಳನ್ನು ಸಂಪರ್ಕಿಸುವುದು.- ಎಂದು ಪ್ರವೇಶಾತಿ ಅಧಿಸೂಚನೆಯಲ್ಲಿದೆ.




EmoticonEmoticon

 

Start typing and press Enter to search