Kalyan Karnataka Road Transport

- September 08, 2022

 ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಮಿಕ್ಕುಳದ ವೃಂದದ ನೇಮಕಾತಿಗೆ ಅರ್ಜಿ ಆಹ್ವಾನ!

 ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ದರ್ಜೆ -3 ಮೇಲ್ವಿಚಾರಕೇತರ ಮಿಕ್ಕುಳದ ವೃಂದದ ನೇಮಕಾತಿಗೆ ಅರ್ಜಿ ಆಹ್ವಾನ!

(ಪರಿಶಿಷ್ಟ ಜಾತಿಯ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಮಾತ್ರ)

ಅರ್ಜಿ ಸಲ್ಲಿಸುವ ವೆಬ್ಸೈಟ್ ವಿಳಾಸ: 18/09/2022

ಅರ್ಜಿ ಸಲ್ಲಿಸುವ ವೆಬ್ಸೈಟ್ ವಿಳಾಸ:

kkrtcjobs.karnataka.gov.in ಅಥವಾ kkrtc.in/jobs


 ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ದರ್ಜೆ -3 ಮೇಲ್ವಿಚಾರಕೇತರ ಮಿಕ್ಕುಳದ ವೃಂದದ ಕ.ರಾ.ಸಾ. ಪೇದೆ ಹಿಂಬಾಕಿ ( Backlog ) ಹುದ್ದೆಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( ಪದವೃಂದ ಮತ್ತು ನೇಮಕಾತಿ ) ನಿಯಮಾವಳಿಗಳು -1982 ಮತ್ತು ತದನಂತರದ ತಿದ್ದುಪಡಿಗಳ ಅನುಸಾರ ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಂದ ಆನ್‌ಲೈನ್ ( Online ) ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ವಿದ್ಯಾರ್ಹತೆ : 

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗಾಗಿ ಪಿ.ಯು.ಸಿ ಉತ್ತೀರ್ಣರಾಗಿರಬೇಕು ಅಥವಾ ಮಾಜಿ ಸೈನಿಕರಾಗಿದ್ದು , 2 ನೇ ದರ್ಜೆ ಆರ್ಮಿ ಸರ್ಟಿಫಿಕೇಟ್ ಅಥವಾ ನೌಕಾದಳ / ವಾಯುದಳದಲ್ಲಿ ತತ್ಸಮಾನ ದರ್ಜೆಯ ಸರ್ಟಿಫಿಕೇಟ್ ಹೊಂದಿರಬೇಕು.


 ಅರ್ಜಿ ಸಲ್ಲಿಸುವ ವಿಧಾನ : 

a ) ಅರ್ಜಿಯನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿಯೇ ಸಲ್ಲಿಸತಕ್ಕದ್ದು . 

b ) ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದಲ್ಲಿ ಮೊದಲು ಸಲ್ಲಿಸಿದ ಅರ್ಜಿಯ ನೊಂದಣಿ ಸಂಖ್ಯೆಯನ್ನು ನಂತರ ಸಲ್ಲಿಸುವ ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು . 

c ) ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ತಕ್ಷಣ ನೊಂದಣಿ ಸಂಖ್ಯೆಯುಳ್ಳ ಅರ್ಜಿಯ ಮುದ್ರಿತ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಹಾಗೂ ಮೂಲ ದಾಖಲಾತಿಗಳ ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸುವುದು . ತಪ್ಪಿದಲ್ಲಿ ಅಭ್ಯರ್ಥನವನ್ನು ತಿರಸ್ಕರಿಸಲಾಗುವುದು . 

d ) ನಿಗದಿತ ಅವಧಿಯ ನಂತರ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ . 

e ) ಒಮ್ಮೆ ಸಲ್ಲಿಸಿದ ಅರ್ಜಿಯ ತಿದ್ದುಪಡಿಗೆ ಅವಕಾಶವಿರುವುದಿಲ್ಲ


ಅರ್ಜಿ ಶುಲ್ಕ : 

ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು 300 / - ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು , ಅದನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಆನ್‌ಲೈನ್ ಅರ್ಜಿಯೊಂದಿಗೆ ಪಾವತಿಸತಕ್ಕದ್ದು , ಆನ್‌ಲೈನ್ ಪಾವತಿ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಅರ್ಜಿ ಶುಲ್ಕ ಪಾವತಿಗೆ ಅವಕಾಶ ಇರುವುದಿಲ್ಲ . ಅಲ್ಲದೇ , ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ / ಸಂದರ್ಭದಲ್ಲಿಯೂ ಒಮ್ಮೆ ಪಾವತಿಸಿದ ಹಿಂತಿರುಗಿಸಲಾಗುವುದಿಲ್ಲ .


Notification: Click here

(ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಿ)

ಸೂಚನೆಗಳು : 

1. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ವೆಬ್‌ಸೈಟ್‌ನಲ್ಲಿ ನೀಡಲಾದ ಸೂಚನೆಗಳನ್ನು ಸಂಪೂರ್ಣವಾಗಿ ಓದಿ ತಿಳಿದುಕೊಂಡ ನಂತರವೇ ಅರ್ಜಿ ಸಲ್ಲಿಸುವುದು . 


2. ವಿದ್ಯಾಭ್ಯಾಸಕ್ಕಾಗಿ / ಶಿಕ್ಷಣಕ್ಕಾಗಿ ಸರ್ಕಾರಿ ಸೌಲಭ್ಯಕ್ಕಾಗಿ ಅಥವಾ ಸಾಲಕ್ಕಾಗಿ ಎಂದು ಪಡೆದಿರುವ ಜಾತಿ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ . 

3. ಅಭ್ಯರ್ಥಿಗಳು ಅರ್ಜಿಯಲ್ಲಿ ಕಡ್ಡಾಯವಾಗಿ SSLC ಅಥವಾ ತತ್ಸಮಾನ ವಿದ್ಯಾರ್ಹತೆಯ ಅಂಕಪಟ್ಟಿಯಲ್ಲಿರುವಂತೆ ಹೆಸರನ್ನು ದಾಖಲಿಸುವುದು . 


4. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಘಟನಾವಳಿಗಳನ್ನು ಮತ್ತು ಮಾಹಿತಿಯನ್ನು ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ದೂರವಾಣಿ ಸಂಖ್ಯೆಗೆ SMS ಮೂಲಕ ತಿಳಿಸಲಾಗುತ್ತದೆ . ಕಾರಣ , ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೆ ಚಾಲನೆಯಲ್ಲಿ ಇಟ್ಟುಕೊಳ್ಳತಕ್ಕದ್ದು . ಮೊಬೈಲ್ ದೂರವಾಣಿ ಅಲಭ್ಯತೆ , ಚಾಲನೆ ಇಲ್ಲದಿರುವುದು , ಇತ್ಯಾದಿಗಳಿಂದಾಗಿ ಅಭ್ಯರ್ಥಿಗೆ ಮಾಹಿತಿಯು ತಲುಪದೇ ಅನಾನುಕೂಲ ಉಂಟಾದಲ್ಲಿ ನಿಗಮವು ಜವಾಬ್ದಾರವಾಗುವುದಿಲ್ಲ . ಈ ಸಂಬಂಧ ನಂತರ ಬರುವ ಯಾವುದೇ ಮನವಿಯನ್ನು ಪರಿಗಣಿಸಲಾಗುವುದಿಲ್ಲ . 

5. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯನ್ನು ತಪ್ಪದೇ ಡೌನ್‌ಲೋಡ್ ಮಾಡಿಕೊಂಡು ಪ್ರತಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ . 


6. ಅಭ್ಯರ್ಥಿಯು ಅರ್ಜಿಯನ್ನು ಸಮರ್ಪಕವಾಗಿ ಭರ್ತಿ ಮಾಡದೇ ಅರ್ಜಿಯು ತಿರಸ್ಕೃತವಾದಲ್ಲಿ ಅಥವಾ ಯಾವುದೇ ಸೌಲಭ್ಯದಿಂದ ಅವರು ವಂಚಿತರಾದಲ್ಲಿ ಅದಕ್ಕೆ ಅಭ್ಯರ್ಥಿಗಳೇ ನೇರ ಜವಾಬ್ದಾರರು . 


7. ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವ ದಿನಾಂಕ , ಸಮಯ , ಸ್ಥಳ , ಇತ್ಯಾದಿಗಳ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು . ಅಲ್ಲದೇ , ಮೂಲ ದಾಖಲಾತಿ ಹಾಗೂ ದೇಹದಾರ್ಡ್ಯತೆ ಪರಿಶೀಲನೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವ ದಿನಾಂಕ , ಸ್ಥಳ , ಸಲ್ಲಿಸಬೇಕಾದ ದಾಖಲಾತಿಗಳು , ಇತ್ಯಾದಿಗಳ ವಿವರಗಳನ್ನು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಪಡೆದು 1 : 5 ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಮಾತ್ರ ತಿಳಿಸಲಾಗುವುದು . 

8. ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ದಾಖಲಾತಿ ಪರಿಶೀಲನೆ / ದೇಹ ದಾರ್ಡ್ಯತೆ ದೈಹಿಕ ಸಾಮರ್ಥ್ಯ ಪರೀಕ್ಷೆ ಇತ್ಯಾದಿಗಳಗಾಗಿ ಪ್ರಯಾಣ ವೆಚ್ಚ ಹಾಗೂ ಇತರೇ ವೆಚ್ಚಗಳನ್ನು ಅಭ್ಯರ್ಥಿಯೇ ಭರಿಸತಕ್ಕದ್ದು , ನಿಗಮದಿಂದ ಯಾವುದೇ ವೆಚ್ಚ ಪಾವತಿಸಲಾಗುವುದಿಲ್ಲ . 


9. ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿ ಅಥವಾ ನಕಲಿ ಪ್ರಮಾಣ ಪತ್ರ / ದಾಖಲಾತಿಗಳನ್ನು ಸಲ್ಲಿಸಿ ನೌಕರಿ ಪಡೆದಿರುವುದು ಯಾವುದೇ ಸಂದರ್ಭದಲ್ಲಿ ಕಂಡು ಬಂದಲ್ಲಿ , ಅವರನ್ನು ನಿಗಮದ ನಿಯಮಾವಳಿಗಳ ಪ್ರಕಾರ ಯಾವುದೇ ಮುನ್ಸೂಚನೆ ನೀಡದೇ ಯಾವುದೇ ಸಮಯದಲ್ಲಾದರೂ ನೌಕರಿಯಿಂದ ತೆಗೆದು ಹಾಕಲಾಗುವುದು / ವಜಾ ಮಾಡಲಾಗುವುದು . ಜೊತೆಗೆ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು . 


10 , ಆನ್‌ಲೈನ್ ಅರ್ಜಿಯಲ್ಲಿ ಅಭ್ಯರ್ಥಿಯು ಘೋಷಿಸಿರುವ ಮಾಹಿತಿಗಳೇ ಅಂತಿಮವಾಗಿದ್ದು , ಹೆಚ್ಚಿನ ಮಾಹಿತಿ / ದಾಖಲೆಗಳ ಸಲ್ಲಿಕೆಗೆ ಅವಕಾಶವಿರುವುದಿಲ್ಲ . 


11. ಅಭ್ಯರ್ಥಿಯು ಸಲ್ಲಿಸುವ ಸಮಯದಲ್ಲಿ ಪ್ರಮಾಣ ಪತ್ರಗಳಲ್ಲಿ ನಮೂದಾಗಿರುವ ಎಲ್ಲಾ ವಿವರಗಳು ತನ್ನದೇ ಎನ್ನುವ ಬಗ್ಗೆ ಖಾತರಿಪಡಿಸಿಕೊಳ್ಳುವುದು . 


12. ಅರ್ಜಿಯಲ್ಲಿ ನೀಡುವ ವಿಳಾಸವೇ ಅಂತಿಮವಾಗಿದ್ದು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರಗಳನ್ನು ಅರ್ಜಿಯಲ್ಲಿ ನಮೂದಿಸಿದ ವಿಳಾಸಕ್ಕೆ


ಮಾಡಲಾಗುವುದು . ನಂತರದಲ್ಲಿ ವಿಳಾಸ ಬದಲಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದವಿರುವುದಿಲ್ಲ . 


13. ನೈತಿಕ ದುರ್ನಡತೆಯಿಂದಾಗಿ ಅಥವಾ ನೀತಿ ಬಾಹಿರ ಚಟುವಟಿಕೆಗಳಿಂದಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಪಟ್ಟಿರುವ ವ್ಯಕ್ತಿ ಅಥವಾ ಈ ಸಂಸ್ಥೆಯಲ್ಲಿ ಅಥವಾ ರಾಜ್ಯ / ಕೇಂದ್ರ / ಸ್ಥಳೀಯ ಸಂಸ್ಥೆ / ಕೈಗಾರಿಕಾ / ವಾಣಿಜ್ಯಕ್ಕೆ ಸಂಬಂಧಪಟ್ಟ ಅಥವಾ ರಾಜ್ಯ ಸಾರಿಗೆ ಅಧೀನದಲ್ಲಿರುವ ಕಛೇರಿಗಳಲ್ಲಿ ನೈತಿಕ ದುರ್ನಡತೆಯಿಂದಾಗಿ ನೀತಿ ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಅಥವಾ ಈ ಹಿಂದೆ ರಾಜ್ಯದ ಯಾವುದಾದರೂ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾನೂನು / ನೀತಿ ಬಾಹಿರ ಚಟುವಟಿಕೆಯಲ್ಲಿ ತೊಡಗಿ ಸೇವೆಯಿಂದ ತೆಗೆದು ಹಾಕಿದ್ದಲ್ಲಿ ವಜಾ ಮಾಡಲ್ಪಟ್ಟಿದ್ದಲ್ಲಿ ಕಾನೂನು ಬಾಹಿರವಾಗಿ ಬಹು ಪತ್ನಿತ್ವ , ಪತಿತ್ವ ಹೊಂದಿರುವ , ಇತ್ಯಾದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ 


14. ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ಅರ್ಹತೆಯನ್ನು ( Criteria ) ಸರಿಯಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪ್ರಮಾಣ ಪತ್ರಗಳನ್ನು ಹೊಂದಿರತಕ್ಕದ್ದು . 


15. SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡದೇ ಇದ್ದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳು ನಿಗಮದ ವತಿಯಿಂದ ನಡೆಸಲ್ಪಡುವ ಕನ್ನಡ ಭಾಷಾ ಜ್ಞಾನದ ಪರೀಕ್ಷೆಯಲ್ಲಿ ಒಂದೇ ಅವಕಾಶದಲ್ಲಿ ಉತ್ತಿರ್ಣರಾಗಬೇಕು ಇಲ್ಲದಿದ್ದಲ್ಲಿ ಅವರ ಆಯ್ಕೆಯನ್ನು ರದ್ದುಗೊಳಿಸಲಾಗುವುದು . 


16. ಕನ್ನಡ ಭಾಷಾ ಜ್ಞಾನವನ್ನು ಹೊಂದುವಿಕೆಯಿಂದ ಈ ಕೆಳಕಂಡವರಿಗೆ ವಿನಾಯ್ತಿ ನೀಡಲಾಗಿದೆ . 


A. ಕರ್ನಾಟಕ ರಾಜ್ಯದಲ್ಲಿ ವಾಸವಿರುವ ಮಾಜಿ ಸೈನಿಕರು ಮತ್ತು ಅವರ ಮಕ್ಕಳು . 


B. ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಮಕ್ಕಳು . 


C. ರಾಜ್ಯದ ಹೊರಗಡೆ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ನೌಕರರ ಮಕ್ಕಳು . 


D. ಕರ್ನಾಟಕದಲ್ಲಿನ ಸಾರ್ವಜನಿಕ ಉದ್ದಿಮೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮಕ್ಕಳು . ಸದರಿ ವಿನಾಯಿತಿಗೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು . ಅಂತಹ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು . 


17. ನೇಮಕಾತಿಯಾಗಿ ಸೇವೆಯಲ್ಲಿ ಖಾಯಂಗೊಳ್ಳುವ ಅಭ್ಯರ್ಥಿಗಳು ಉಪದಾನ ಪಾವತಿ ಕಾಯ್ದೆ 1972 ರನ್ವಯ ಉಪದಾನ ಪಡೆಯಲು ಅರ್ಹರಿರುತ್ತಾರೆ . ಮುಕ್ತ ವೇತನ ಶ್ರೇಣಿಗೆ ಅರ್ಹರಾಗಿರುವುದಿಲ್ಲ . 


18. ಅಭ್ಯರ್ಥಿಯು ತನ್ನ ಆಯ್ಕೆಗಾಗಿ ಯಾವುದೇ ವಿಧವಾದ ಪ್ರಚಾರ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಯಾವ ಮುನ್ಸೂಚನೆ ನೀಡದೇ ಅವರನ್ನು ಅನರ್ಹಗೊಳಿಸಲಾಗುವುದು . 


19. ಅಭ್ಯರ್ಥಿಯು ಸಾರ್ವಜನಿಕ ಉದ್ದಿಮೆ ಅಥವಾ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಅಂತಹ ಅಭ್ಯರ್ಥಿಯು ಸೂಕ್ತ ಪ್ರಾಧಿಕಾರಸ್ಥರಿಂದ ಈ ಸಂಸ್ಥೆಗೆ ಅರ್ಜಿ ಸಲ್ಲಿಸಲು ಆಕ್ಷೇಪಣೆ ಇಲ್ಲವೆಂಬ ಬಗ್ಗೆ ನಿರಾಕ್ಷೇಪಣಾ ಪತ್ರವನ್ನು ಹಾಜರುಪಡಿಸತಕ್ಕದ್ದು . 


20. ನೇಮಕಾತಿಯ ವಿವಿಧ ಹಂತಕ್ಕೆ ಸಂಬಂಧಪಟ್ಟ ಎಲ್ಲಾ ವಿವರಗಳನ್ನು ನಿಗಮದ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿರುತ್ತದೆ . ಆದ್ದರಿಂದ , ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಅಭ್ಯರ್ಥಿಗಳು ಯಾವುದೇ ರೀತಿಯ ಪತ್ರ ವ್ಯವಹಾರ ಅಥವಾ ವಿಚಾರಣಿಗಳಿಗೆ ಆಸ್ಪದವಿರುವುದಿಲ್ಲ . 


21. ಅಭ್ಯರ್ಥಿಗಳ ಅರ್ಹತೆ ಮತ್ತು ಆಯ್ಕೆಯ ವಿಷಯದಲ್ಲಿ ಕ.ಕ.ರ.ಸಾ.ನಿಗಮ ಆಯ್ಕೆ ಸಮಿತಿ / ಸಕ್ಷಮ ಪ್ರಾಧಿಕಾರಿಗಳ ನಿರ್ಧಾರವೇ ಅಂತಿಮವಾಗಿರುತ್ತದೆ . 


22. ಅಭ್ಯರ್ಥಿಗಳನ್ನು ನಿಗಮದ ಅವಶ್ಯಕತೆಗೆ ಅನುಗುಣವಾಗಿ ಅವರ ಸೇವಾವಧಿಯಲ್ಲಿ ಕ.ಕ.ರ.ಸಾ. ನಿಗಮದ ಯಾವುದೇ ವಿಭಾಗಗಳಿಗೆ ನಿಯೋಜಿಸಬಹುದಾಗಿರುತ್ತದೆ .


23. ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳು ಕ.ಕ.ರ.ಸಾ.ನಿಗಮದಿಂದ ರಾಜ್ಯದ ಇತರೆ ಸಾರಿಗೆ ಸಂಸ್ಥೆಗಳಾದ KSRTC , BMTC ಅಥವಾ NWKRTCH ವರ್ಗಾವಣೆ ಹೊಂದಲು ಅವಕಾಶಗಳಿರುವುದಿಲ್ಲ . 


ವಿಶೇಷ ಸೂಚನೆ : ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲಾಗುತ್ತಿದ್ದು , ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕಗಳನ್ನು ಗಳಸಿದ ಅಭ್ಯರ್ಥಿಗಳನ್ನು ಮಾತ್ರ ನೇಮಕಾತಿಯ ಮುಂದಿನ ಹಂತಕ್ಕೆ ಪರಿಗಣಿಸಲಾಗುತ್ತದೆ . ಆದ್ದರಿಂದ ಅಭ್ಯರ್ಥಿಗಳು ಮಧ್ಯವರ್ತಿಗಳ ಅಥವಾ ಯಾವುದೇ ತರಹದ ಆಮಿಷಕ್ಕೆ ಒಳಗಾಗಬಾರದು . ವಿಚಾರಣೆಗಾಗಿ ಸ್ಥಿರ ದೂರವಾಣಿ ಸಂಖ್ಯೆ 08472-227687 ಗೆ ಕಚೇರಿ ಕೆಲಸದ ದಿನಗಳಂದು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

Click here for Other job Information

👇👇👇👇👇

NEET Result 2022 Announced ! 

15,000 ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ? 

ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ! 

 Last Date:30/09/2022 


EmoticonEmoticon

 

Start typing and press Enter to search