GST IN DETAILS

- March 24, 2022

 ಜಿ ಎಸ್ ಟಿ ( GST ) ಬಗ್ಗೆ ಎಲ್ಲಾ 

ಸ್ಪರ್ಧಾತ್ಮಕ ಪರೀಕ್ಷೆ ಉಪಯುಕ್ತ 

ಸಂಪೂರ್ಣ ಮಾಹಿತಿ:




ಜಿಎಸ್ ಟಿ (GST) ಬಗ್ಗೆ ಮಾಹಿತಿ..

 ಭಾರತದಲ್ಲಿ ಜಾರಿಯಲ್ಲಿದ್ದ ಎಲ್ಲಾ ತೆರಿಗೆಗಳನ್ನು ರದ್ದು ಮಾಡಿ ಜಿಎಸ್ ಟಿ ಪದ್ಧತಿಯನ್ನು ಜಾರಿಗೆ ತರಲಾಗಿದೆ 
ಇದು ಒಂದು ಪರೋಕ್ಷ ತೆರಿಗೆ ಪದ್ಧತಿ ಸುಧಾರಣೆ. (Indirect Tax)

GST - Goods And Service Tax.


 ಜಿಎಸ್ ಟಿ ಯ ತತ್ತ್ವ - ಒಂದು ರಾಷ್ಟ್ರ, ಒಂದು ಮಾರುಕಟ್ಟೆ, ಒಂದು ತೆರಿಗೆ.

 ಜಿಎಸ್ ಟಿ ಯು ಜಾರಿಯಾಗಿದ್ದು - 2017 ಜುಲೈ 01 ಹಾಗಾಗಿ ಜುಲೈ 01 ನ್ನ ಜಿಎಸ್ ಟಿ ದಿನವನ್ನಾಗಿ ಆಚರಿಸುವರು.

 ಜಿಎಸ್ ಟಿ ಜಾರಿಗೆ ಬಂದಾಗ ಇದ್ದ ಭಾರತದ ರಾಷ್ಟಪತಿ - ಪ್ರಣಬ್ ಮುಖರ್ಜಿ
ಅಂದಿನ ಪ್ರಧಾನಿ - ನರೇಂದ್ರ ಮೋದಿ.

 ಜಿಎಸ್ ಟಿ ಯನ್ನ ಭಾರತ ದೇಶ ಕೆನಡಾ ದೇಶದಿಂದ ಎರವಲು ಪಡೆದುಕೊಂಡಿದೆ.

 ಪ್ರಪಂಚದಲ್ಲಿ ಜಿಎಸ್ ಟಿ ಮೊದಲು ಜಾರಿಯಾಗಿದ್ದು 1954 ರಲ್ಲಿ ಫ್ರಾನ್ಸ್ ನಲ್ಲಿ.

 ಭಾರತದ ಜಿಎಸ್ ಟಿ ಪಿತಾಮಹ - ಅಶಿಮದಾಸ್ ಗುಪ್ತಾ.

 ಭಾರತದ ಸಂವಿಧಾನದ 122 ನೆ ತಿದ್ದುಪಡಿ ಮಸೂದೆ 2014 ರನ್ವಯ 101 ನೆ ತಿದ್ದುಪಡಿ ಕಾಯ್ದೆಯ ಮೂಲಕ ಜಾರಿಗೆ ಬಂದಿದೆ.

 ಭಾರತದಲ್ಲಿ ಜಿಎಸ್ ಟಿ ಯನ್ನ ಮೊದಲು ಅಳವಡಿಸಿಕೊಂಡಿದ್ದ ರಾಜ್ಯ - ಅಸ್ಸಾಂ 2016 ಆಗಷ್ಟ್ 12.
ಎರಡನೇ ರಾಜ್ಯ - ಬಿಹಾರ್ 2016 ಆಗಷ್ಟ್ 16.
ಮೂರನೇ ರಾಜ್ಯ - ಜಾರ್ಖಂಡ್ 2016 ಆಗಷ್ಟ್ 17.

 ಜಿಎಸ್ ಟಿ ಅಳವಡಿಸಿಕೊಂಡ ಕೊನೆಯ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ - ಜಮ್ಮು ಕಾಶ್ಮೀರ.

 ಜಿಎಸ್ ಟಿ ಯ ಮಂಡಳಿಯ ಪದನಿಮಿತ್ತ ಅಧ್ಯಕ್ಷರು - ಕೇಂದ್ರ ಹಣಕಾಸು ಸಚಿವರು.

* ಜಿಎಸ್ ಟಿ ಮಂಡಳಿಯ ಮೊದಲ ಪದನಿಮಿತ್ತ ಅಧ್ಯಕ್ಷರು ಅರುಣ್ ಜೇಟ್ಲಿ

 ಜಿಎಸ್ ಟಿ ಮಂಡಳಿಯ ಮೊದಲ ಪದನಿಮಿತ್ತ ಮಹಿಳಾ ಅಧ್ಯಕ್ಷರು - ನಿರ್ಮಲಾ ಸೀತಾರಾಮನ್.

 ಜಿಎಸ್ ಟಿ ನಷ್ಟ ಪರಿಹಾರ ನೀಡಲು ಆಧಾರವಾದ ಹಣಕಾಸು ಮೂಲ ವರ್ಷ - 2015-16 ಈ ವರ್ಷದ ಆಧಾರದ ಮೇಲೆ ಸಿಎಜಿ ಅವರು ಮುಂದಿನ 05 ವರ್ಷಗಳವರೆಗೆ ಲೆಕ್ಕ ಪರಿಶೋಧನೆ ಆಧಾರದ ಮೇಲೆ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರವನ್ನು ನೀಡಲು ನಿರ್ಧರಿಸುತ್ತಾರೆ.

 ಜಿಎಸ್ ಟಿ ಯಲ್ಲಿ ಮೂರು ರೀತಿಯ ತೆರಿಗೆಗಳು - 
CGST - ಕೇಂದ್ರ ಸರಕು ಮತ್ತು ಸೇವಾ ತೆರಿಗೆ 
SGST - ರಾಜ್ಯ ಸರಕು ಮತ್ತು ಸೇವಾ ತೆರಿಗೆ.
IGST - ಅಂತರ್ಗತ ಸರಕು ಮತ್ತು ಸೇವಾ ತೆರಿಗೆ.

 ಜಿಎಸ್ ಟಿ ಯ ನಾಲ್ಕು ಹಂತಗಳು -
5%, 12%, 18%, 28%

 ಸರಕು ಮತ್ತು ಸೇವಾ ತೆರಿಗೆ ಮಂಡಳಿ ( ಜಿಎಸ್ ಟಿ ಮಂಡಳಿ ) ರಾಷ್ಟ್ರಪತಿಗಳಿಂದ ರಚನೆಯಾಗಿದ್ದು ಇದರ ಅಧ್ಯಕ್ಷರು - ಕೇಂದ್ರ ಹಣಕಾಸು ಸಚಿವರು.

ಇದರ ರಚನೆಗೆ ಸಂಬಂಧಿಸಿದ ವಿಧಿ - 279/1 ಅಥವಾ 279/A

ಈ ಮಂಡಳಿ ಅನುಮೋದನೆ ಆಗಿದ್ದು - 2016 ಸೆಪ್ಟೆಂಬರ್ 12 ರಂದು.

ಜಿಎಸ್ ಟಿ ಮಂಡಳಿಯ ಕೇಂದ್ರ ಕಾರ್ಯಾಲಯ - ದೆಹಲಿಯಲ್ಲಿದೆ.

ಈ ಮಂಡಳಿಯ ಮೊದಲ ಸಭೆ ನಡೆದಿದ್ದು - 2016 ಸೆಪ್ಟೆಂಬರ್ 22-23 ದೆಹಲಿಯಲ್ಲಿ....

JOIN US :~


EmoticonEmoticon

 

Start typing and press Enter to search