KPSC STUDY MATERIALS / Global Organizations Headlines

- March 23, 2022

 

 KPSC STUDY MATERIALS/

ಜಾಗತಿಕ ಸಂಸ್ಥೆಗಳು ಮುಖ್ಯಾಂಶಗಳು





*• ವಿಶ್ವಸಂಸ್ಥೆಯು ಪ್ರಾರಂಭವಾದದ್ದು ಅಕ್ಟೋಬರ್ 24, 1945.*

*• ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.*

*• ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.*

*• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅವಧಿ ಒಂಬತ್ತು ವರ್ಷಗಳು.*

*• ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.*

*• ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು ಅಂಟೋನಿಯೋ ಗಟರ್ಸ್ (Antonio Guterres ಜನೆವರಿ1, 2017 ರಿಂದ)*

*• ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.*

*• ಸಾರ್ಕ ಸ್ಥಾಪನೆಯಾದ ವರ್ಷ 1985.*

*• ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).*

*• ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.*

• ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.*

*• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.*

*• ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಂಸ್ಥೆ : 1948*

*• ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.*

*• ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.*

*🌐• ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.*

*• ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.*

*🌎ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದ ದೇಶಗಳ ಹೆಸರುಗಳು:*

ಇಂಗ್ಲೆಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.

*🌐ವಿಶ್ವಸಂಸ್ಥೆಯ ಅಂಗಸಂಸ್ಥೆಗಳು:*

1. ಸಾಮಾನ್ಯ ಸಭೆ

2. ಭದ್ರತಾ ಸಮಿತಿ

3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ

4. ಧರ್ಮದರ್ಶಿ ಸಮಿತಿ

5. ಸಚಿವಾಲಯ

6. ಅಂತರಾಷ್ಟ್ರೀಯ ನ್ಯಾಯಾಲಯ


*🌐ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು:*

ಇಂಗ್ಲೆಂಡ
ಅಮೆರಿಕಾ
ರಷ್ಯಾ
ಫ್ರಾನ್ಸ್
ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು
 

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ಸೂಚಿಯಲ್ಲಿರುವ ವಿಷಯಗಳು:

ಜನಸಂಖ್ಯಾ ಸ್ಪೋಟ ತಡೆಗಟ್ಟುವದು, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕಾಂಶದ ಕೊರತೆ ಮುಂತಾದ ವಿಷಯಗಳು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿಷಯಗಳಾಗಿವೆ.

*🌐ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳು:*

• ಎಲ್ಲಾ ಉದ್ಯೋಗಗಳಲ್ಲಿಯೂ ಕಾರ್ಮಿಕರ ಜೀವನ ಮಟ್ಟವನ್ನು ಉತ್ತಮಗೊಳಿಸುವದು.

• ಬಾಲ ಕಾರ್ಮಿಕರ ನೇಮಕ ತಡೆಯುವದು.

• ಸ್ತ್ರೀ ಕಾರ್ಮಿಕರಿಗೆ ಹೆರಿಗೆ, ಪೌಷ್ಟಿಕ ಆಹಾರ, ವಸತಿ, ಮನರಂಜನೆ ಮುಂತಾದ ಸೌಲಭ್ಯಗಳನ್ನು ಒದಗಿಸುವದು.

• ಉದ್ದಿಮೆಗಳ ಆಡಳಿತದಲ್ಲಿ ಕಾರ್ಮಿಕರಿಗೂ ಪಾಲುಗೊಳ್ಳುವ ಅವಕಾಶಗಳನ್ನು ಕಲ್ಪಿಸುವದು.


*🌐ವಿಶ್ವಸಂಸ್ಥೆಯ ಉದ್ದೇಶಗಳು:*

• ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವದು.

• ವಿವಿಧ ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು ಬೆಳೆಸುವದು.

• ಮಾನವನ ಮೂಲಭೂತ ಹಕ್ಕುಗಳನ್ನು ರಕ್ಷಿಸುವದು.

• ಆಂತರಾಷ್ಟ್ರೀಯ ಸಮಸ್ಯೆಗಳನ್ನು ಅಂತರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು.

• ಅಂತರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವದು.

• ಪ್ರಪಂಚದ ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವದು.

*🌐ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳು:*

• ಜನರ ಜೀವನ ಮಟ್ಟ ಸುಧಾರಿಸುವದು, & ಉದ್ಯೋಗಾವಕಾಶ ಒದಗಿಸುವದು.

• ನಿರಾಶ್ರಿತರ, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆಗಳನ್ನು ನಿವಾರಿಸಲು ಕ್ರಮವಹಿಸುವದು.

• ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸುವದು.

• ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಏರ್ಪಡಿಸುವದು.

• ಜನಾಂಗ, ಲಿಂಗ, ಭಾಷೆ, ಧರ್ಮಗಳ ಭೇದ ಭಾವನೆಗಳಿಗೆ ಆಸ್ಪದ ನೀಡದೇ ಎಲ್ಲಾ ಮಾನವರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವದು.

• ಮಾನವ ಸಂಪನ್ಮೂಲ, ಸಂಸ್ಕೃತಿ, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವದು.

*🌐ಯುನೆಸ್ಕೋದ ಕಾರ್ಯಗಳು:*

• ಶಾಂತಿ ಸ್ಥಾಪನೆ.

• ಮಾನವನ ಹಕ್ಕುಗಳನ್ನು ರಕ್ಷಿಸುವದು

• ಶೈಕ್ಷಣಿಕ ಅಭಿವೃದ್ಧಿ ಸಾಧನೆ

• ಮಾನವರ ವಿಕಾಸಕ್ಕೆಂದೇ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆ.

• ಪರಿಸರ ಹಾಗೂ ಮಾನವರ ನಡುವೆ ಸಮತೋಲನ

• ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವದು.

*🌐ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಾರ್ಯಗಳು:*

• ಪ್ರತಿ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಸಾಮಾನ್ಯ ಸಭೆಯ ಅಧಿವೇಶನವನ್ನು ಕರೆಯುವದು.

• ಪ್ರಮುಖ ವಿಷಯಗಳನ್ನು ಬಹುಮತದ ಸಿದ್ದಾಂತದಂತೆ ಅಥವಾ 2/3 ಮತಗಳ ಬೆಂಬಲದಿಂದ ನಿರ್ಧರಿಸುವದು.

• ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.

• ಪ್ರತಿಯೊಂದು ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು ನಿಗದಿ ಮಾಡುತ್ತದೆ.

*🌐ಸಾರ್ಕ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶ:*

ಆರ್ಥಿಕ ಸಂಬಂಧಗಳ ವೃದ್ಧಿ, ಸಾಮಾಜಿಕ ಪ್ರಗತಿ ಹಾಗೂ ಸಾಂಸ್ಕೃತಿಕ ಬೆಳವಣಿಗೆಯನ್ನು ಪರಸ್ಪರ ಸಹಕಾರದೊಂದಿಗೆ ಸಾಧಿಸುವಿಕೆ ಸಾರ್ಕ ಸಂಸ್ಥೆಯ ಮೂಲ ಉದ್ದೇಶವಾಗಿದೆ.

*🌐ಆಹಾರ & ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶಗಳು:*

• ಪೌಷ್ಟಿಕ ಆಹಾರ ಒದಗಿಸುವುದು.

• ಹಸಿವೆಯಿಂದ ಜಾಗತಿಕ ಜನಸಮುದಾಯವನ್ನು ವಿಮುಕ್ತಿಗೊಳಿಸುವುದು.

• ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದು.

• ಗ್ರಾಮಾಂತರ ಪ್ರದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವುದು.

*🌐ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಗಳು:*

• ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುತ್ತದೆ.

• ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ನೂತನ ಸದಸ್ಯರ ಆಯ್ಕೆಯನ್ನು ಶಿಫಾರಸ್ಸು ಮಾಡುವ ಅಥವಾ ತಿರಸ್ಕರಿಸುವ ಆಧಿಕಾರವನ್ನು ಹೊಂದಿದೆ.

• ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯನ್ನು ಸೂಚಿಸುವ ಅಧಿಕಾರವನ್ನು ಹೊಂದಿದೆ.

• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ ಭಾಗವಹಿಸುತ್ತದೆ.

*🌐ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ರಚನೆ:*

• ಈ ಸಮಿತಿಯು 15 ಪ್ರತಿನಿಧಿಗಳಿಂದ ಕೂಡಿದ್ದು, ಅದರಲ್ಲಿ 5 ಖಾಯಂ ಸದಸ್ಯರು ಹಾಗೂ 10 ಹಂಗಾಮಿ ಸದಸ್ಯರನ್ನು ಹೊಂದಿದೆ.

• ಇಂಗ್ಲಂಡ, ಅಮೇರಿಕಾ, ರಷ್ಯಾ, ಪ್ರಾನ್ಸ್, ಚೀನಾ ಖಾಯಂ ಸದಸ್ಯ ರಾಷ್ಟ್ರಗಳು

• ಖಾಯಂ ಸದಸ್ಯರಿಗೆ ‘ವಿಟೋ’ ಅಂದರೆ ನಿಷೇದಾತ್ಮಕ ಮತ ಚಲಾಯಿಸುವ ವಿಶೇಷ ಅಧಿಕಾರ ಇದೆ.

*🌐ವಿಶ್ವಸಂಸ್ಥೆಯ ಸಾಧನೆಗಳು:*

• ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ.

• ವಿಶ್ವದ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ. ಉದಾ : ಸೂಯೇಜ್‍ಕಾಲುವೆ ಬಿಕ್ಕಟ್ಟು ನಿವಾರಣೆ, ಇರಾನ್ ¸ಸಂಘರ್ಷ, ಇಂಡೋನೆಷ್ಯಾ ಸ್ವಾತಂತ್ರ್ಯ ಘೋಷಣೆ.

• ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣ ನಿಟ್ಟಿನಲ್ಲಿ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.

• ವಿಶ್ವದ ಸಾಮಾಜಿಕ & ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮಾಡುತ್ತದೆ.

• ವರ್ಣಭೇದ ನೀತಿಯನ್ನು ಅಳಿಸಿ ಹಾಕುವಲ್ಲಿ, ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವ ಇತ್ಯಾದಿಗಳನ್ನು ಇಲ್ಲವಾಗಿಸುವಲ್ಲಿಯೂ ವಿಶ್ವಸಂಸ್ಥೆಯ ಪಾತ್ರ ಗಮನಾರ್ಹವಾದದು.

*🌐ಯುನಿಸೆಫ್ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶ:*

ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.

ಸಾರ್ಕ ಸಂಸ್ಥೆಯ ಪ್ರಗತಿಗೆ ತೊಡಕಾಗಿರುವ ಅದರ ಸೂತ್ರ:
‘ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು’ ಎಂಬ ಸಾರ್ಕನ ಸೂತ್ರವು ಅದರ ಪ್ರಗತಿಗೆ ಒಂದು ತೊಡಕಾಗಿ ಪರಿಣಮಿಸಿದೆ.

*🌐ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಗಳು:*

• ಕಾಲರಾ, ಪ್ಲೇಗ್, ಮಲೇರಿಯಾ, ಸಿಡುಬು ಮುಂತಾದ ರೋಗಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಯತ್ನಿಸುತ್ತದೆ.

• ಏಡ್ಸ್, ಕ್ಯಾನ್ಸರ್‍ನಂತಹ ಭೀಕರ ರೋಗಗಳಿಂದ ಪ್ರಪಂಚವನ್ನು ಮುಕ್ತಿಗೊಳಿಸಲು ಪ್ರಯತ್ನಿಸುತ್ತದೆ.

• ಸಿಡುಬು ರೋಗವನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಈ ಸಂಸ್ಥೆ ಯಶಸ್ಸು ಕಂಡಿದೆ.

• ಜನಸಂಖ್ಯಾ ಸ್ಪೋಟ, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕತೆಯ ಕೊರತೆ ಮುಂತಾದ ವಿಷಯಗಳು ಈ ಸಂಸ್ಥೆಯ ಕಾರ್ಯ ಸೂಚಿಯಲ್ಲಿವೆ.




EmoticonEmoticon

 

Start typing and press Enter to search