1.60 lakh subsidy for farmers to build onion shed in their fields, apply

- September 13, 2022

1.60 lakh subsidy for farmers to build onion shed in their fields, apply

ರೈತರು ಹೊಲದಲ್ಲಿ ಈರುಳ್ಳಿ ಶೆಡ್ ನಿರ್ಮಿಸಲು 1.60 ಲಕ್ಷ ಸಹಾಯಧನ ಆಸಕ್ತರು ಅರ್ಜಿಸಲ್ಲಿಸಿ


ಈರುಳ್ಳಿಗೆ ಕೆಲವೊಂದು ಬಾರಿ ಬೆಲೆ ಇರುತ್ತದೆ ಹಾಗೂ ಕೆಲವೊಂದು ಬಾರಿ ಇರುವುದಿಲ್ಲ ಹಾಗೆಯೇ ದೊಡ್ಡ ರೈತರು ಹಾಗೂ ದಲ್ಲಾಳಿಗಳು ಈರುಳ್ಳಿಗೆ ಶೇಡ್ ಮಾಡಿಕೊಂಡು ಹೆಚ್ಚಿನ ಬೆಲೆ ಇರುವಾಗ ಮಾರಾಟ ಮಾಡುವ ಮೂಲಕ ಹೆಚ್ಚು ಲಾಭಗಳಿಸುತ್ತಾರೆ ಅನೇಕ ಸಣ್ಣ ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಂಕಷ್ಟದಲ್ಲಿ ಇರುತ್ತಾರೆ

ಈರುಳ್ಳಿಯು ಹೆಚ್ಚು ತೇವಾಂಶಭರಿತ ಬೆಳೆಯಾಗಿದ್ದು ಶೀಘ್ರವಾಗಿ ಹಾಳಾಗುವ ಗುಣ ಹೊಂದಿರುವ ಕಾರಣ ಸುಮಾರು ಮೂರ ರಿಂದ ನಾಲ್ಕು ತಿಂಗಳುಗಳ ಕಾಲ ಈರುಳ್ಳಿಯನ್ನು ಹಾಳಾಗದಂತೆ ಶೇಖರಿಸಿ ಸಂಗ್ರಹಿಸಲು ಹಾಗೂ ಮಾರುಕಟ್ಟೆ ಬೆಲೆ ಏರಿಳಿತ ಕಂಡಾಗ ಸದರಿ ಘಟಕದಲ್ಲಿ ಸಂಗ್ರಹಿಸಿದ ಈರುಳ್ಳಿಗೆ ಉತ್ತಮ ಬೆಲೆ ದೊರಕುವ ಕಾರಣ ಕರ್ನಾಟಕ ಸರ್ಕಾರ ಈರುಳ್ಳಿಯನ್ನು ಸಂಗ್ರಹಿಸಿ ಇಡಲು ಶೇಡ್ ನಿರ್ಮಿಸಲು ಸಣ್ಣ ಮತ್ತು ದೊಡ್ಡ ಪ್ರಮಾಣದ ರೈತರಿಗೆ ಸಹಾಯಧನವನ್ನು ನೀಡುತ್ತಿದೆ

ಹಾಗೆಯೇ ಈರುಳ್ಳಿಯನ್ನು ಸಂರಕ್ಷಿಸಿ ಒಳ್ಳೆಯ ಬೆಲೆ ಕೊಡುವ ಮೂಲಕ ರೈತರು ಹೆಚ್ಚು ಲಾಭ ಗಳಿಸುವ ಉದ್ದೇಶಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸಿದೆ. ನಾವು ಈ   ಮೂಲಕ ಈರುಳ್ಳಿ ಶೇಡ್ ನಿರ್ಮಾಣಕ್ಕೆ ಸರ್ಕಾರ ನೀಡುವ ಸಹಾಯಧನದ ಬಗ್ಗೆ ತಿಳಿದುಕೊಳ್ಳೋಣ.

ಕೆಲವು ಸಂಧರ್ಭಗಳಲ್ಲಿ ಈರುಳ್ಳಿಗೆ ಬೆಲೆಯೆ ಇರುವುದಿಲ್ಲ ಬೆಲೆ ಇದ್ದರು ಈರುಳ್ಳಿಯನ್ನು ಕೊಳ್ಳುವವರೇ ಇರುವುದಿಲ್ಲ ಉಳ್ಳವರು ಈರುಳ್ಳಿಯನ್ನು ಜೋಪಾನ ಮಾಡಿ ಒಳ್ಳೆಯ ಬೆಲೆ ಗೆ ಮಾರಾಟ ಮಾಡುತ್ತಾರೆ ಒಳ್ಳೆಯ ಲಾಭ ಪಡೆಯುತ್ತಾರೆ ಇದನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಸಣ್ಣ ರೈತರಿಗೆ ಹಾಗೂ ದೊಡ್ಡ ರೈತರಿಗೆ ಈರುಳ್ಳಿ ಶೇಡ್ ನಿರ್ಮಿಸಲು ಸಹಾಯಧನ ನೀಡುತ್ತಿದೆ

ಈರುಳ್ಳಿ ಶೇಡ್ ನಿರ್ಮಿಸಲು ಸರ್ಕಾರ ಸಹಾಯಧನ ನೀಡಲು ಕೆಲವು ದಾಖಲೆಗಳನ್ನು ಲಗತ್ತಿಸಬೇಕು ಅವು ಯಾವುದೆಂದರೆ ಪಡಿತರ ಚೀಟಿ ಬೇಕಾಗುತ್ತದೆ ಹಾಗೂ ಆಧಾರ್ ಕಾರ್ಡ್ ಬೇಕಾಗುತ್ತದೆ ಹಾಗೆಯೇ ನೀರು ಬಳಕೆ ಪತ್ರ ಸಹ ಬೇಕಾಗುತ್ತದೆ ಇಪ್ಪತ್ತು ರೂಪಾಯಿ ಸ್ಟ್ಯಾಂಪ್ ಪೇಪರ್ ನಲ್ಲಿ ಹೇಳಿಕೆ ಮತ್ತು ಘೋಷಣೆಯನ್ನು ಬರೆದು ಸಹಿ ಮಾಡಿಸಬೇಕು ಸ್ಟ್ಯಾಂಪ್ ಪೇಪರ್ ನಲ್ಲಿ ಅರ್ಜಿ ದಾರರ ಹೆಸರು ಇರಬೇಕು ಎರಡನೇ ಪಾರ್ಟಿ ಹೆಸರು ತೋಟಗಾರಿಕೆ ಕಚೇರಿ ಎಂದು ಇರಬೇಕು .

ಜೆರಾಕ್ಸ್ ಶಾಪ್ ನಲ್ಲಿ ಸಿಗುವ ಅರ್ಜಿ ನಮೂನೆಯನ್ನು ತಂದುಸಂಪೂರ್ಣವಾಗಿ ಭರ್ತಿ ಮಾಡಬೇಕು ಬ್ಯಾಂಕ್ ಪಾಸ ಬುಕ್ ನ ಜೆರಾಕ್ಸ್ ಪ್ರತಿ ಇರಬೇಕು ನಮೂನೆ ಆರನ್ನು ತೆಗೆದುಕೊಳ್ಳಬೇಕು ಹಾಗೂ ಕೆಲಸಗಾರನ ಹೆಸರು ಜಾಬ್ ಕಾರ್ಡ್ ನಂಬರ್ ನಮೂದಿಸಬೇಕು ಹಾಗೆಯೇ ಪಿಡಿಯೋ ಅವರ ಸಹಿ ಇರಬೇಕು ಹಾಗೆಯೇ ಹೊಲದ ಪಹಣಿ ಬೇಕಾಗುತ್ತದೆ ಈ ಮೇಲಿನ ಎಲ್ಲ ದಾಖಲೆಗಳನ್ನು ತಾಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಗೆ ಕೊಡಬೇಕು

ತೋಟಗಾರಿಕೆ ಇಲಾಖೆಯ ಪ್ರತಿನಿಧಿ ಪರಿಶೀಲಿಸಿ ಅಧಿಕಾರಿಯ ಅನುಮತಿ ಪಡೆದು ಕ್ರೀಯಾ ಯೋಜನೆ ಸಿದ್ದ ಪಡಿಸುತ್ತಾರೆ ನಂತರ ಅದನ್ನು ಇಲಾಖೆಯ ಕಂಪ್ಯೂಟರ್ ಗೆ ದಾಖಲಿಸಿದ ಮೇಲೆ ನಂತರ ಕ್ಷೇತ್ರ ಪ್ರತಿನಿಧಿಯೂ ಈರುಳ್ಳಿ ಬೆಳೆದ ಪ್ರದೇಶಕ್ಕೆ ಭೇಟಿ ನೀಡುತ್ತಾರೆ ನೇರವಾಗಿಶೇಡ್ ಮಾಡಲು ಕೆಲಸಗಾರನ ಬ್ಯಾಂಕ್ ಖಾತೆಗೆ ಶೇ ನಲವತ್ತರಷ್ಟು ಸಹಾಯಧನ ನೀಡುತ್ತಾರೆ ಹಾಗೆಯೇ ಅರವತ್ತರಷ್ಟು ಹಣವನ್ನು ಮೆಟೀರಿಯಲ್ ಅಂಗಡಿಗೆ ಕೊಡುತ್ತಾರೆ .

ಹಣ ಬಿಡುಗಡೆಯೂ ಕ್ರೀಯಾ ಯೋಜನೆಗೆ ತಕ್ಕಂತೆ ಧನ ಸಹಾಯ ಮಾಡುತ್ತಾರೆ ಅರವತ್ತು ಸಾವಿರದಿಂದ ಒಂದು ಲಕ್ಷದ ಅರವತ್ತು ಸಾವಿರದ ವರೆಗೆ ಸಹಾಯಧನ ನೀಡುತ್ತಾರೆ ಹೊಲದಲ್ಲಿ ಎಸ್ಟು ವಿಸ್ತೀರ್ಣದಲ್ಲಿ ಈರುಳ್ಳಿ ಪಡೆದಿದೆ ಎಂದು ತಿಳಿದು ಶೇಡ್ ಅನ್ನು ನಿರ್ಮಿಸಲಾಗುತ್ತದೆ ಹೊಲದ ವಿಸ್ತೀರ್ಣ ಹಾಗೂ ಸಣ್ಣ ರೈತ ಹಾಗೂ ದೊಡ್ಡ ರೈತನ ಅನುಗುಣವಾಗಿ ಶೇಡ್ ಅನ್ನು ನಿರ್ಮಿಸಲಾಗುತ್ತದೆ

 

ಕೆಲಸಗಾರ ಕೂಲಿಯೂ ಉದ್ಯೋಗ ಖಾತ್ರಿ ಯ ಡಿ ನೇರವಾಗಿ ಕೆಲಸಗಾರನ ಬ್ಯಾಂಕ್ ಅಕೌಂಟ್ ಗೆ ಜಮಾ ಆಗುತ್ತದೆ ಮಟಿರಿಯಲ್ ಅಂಗಡಿಯ ಮಾಲೀಕನಿಗೆ ಸಹ ಜಮಾ ಆಗುತ್ತದೆ ಇದರಿಂದ ಹತ್ತು ಪರ್ಸೆಂಟ್ ಇತರೆ ಖರ್ಚಿಗಾಗಿ ಅರ್ಜಿ ದಾರದ ಹೆಸರಿಗೆ ವರ್ಗಾವಣೆ ಆಗುತ್ತದೆ ಸದ್ರಿ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಇಲಾಖೆ ಮಾಡುವ ಯೋಜನೆ ಇದಾಗಿದೆ ಈರುಳ್ಳಿ ಹೆಚ್ಚು ತೇವಾಂಶದಿಂದ ಕೂಡಿದ್ದರಿಂದ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಆದುದರಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆಗೊಳಿಸಕಾಗಿದೆ.


EmoticonEmoticon

 

Start typing and press Enter to search