Circular regarding the recruitment of High School Assistant Professor!

- September 23, 2022

ಪ್ರೌಢಶಾಲಾ ಸಹಶಿಕ್ಷಕರ ನೇಮಕಾತಿ ಕುರಿತು ಸುತ್ತೋಲೆ!

ಸರಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 2500 ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದ್ದು , ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು . ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್ ಪ್ರಶ್ನೆಗೆ ಉತ್ತರಿಸಿದ ಸಚಿವರು , ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 


ಪ್ರಸ್ತುತ ವರ್ಷ 5159 ಅತಿಥಿ ಶಿಕ್ಷಕರ ನೇಮಕ!

ಪ್ರಸ್ತುತ ವರ್ಷ 5159 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.  


ಪ್ರಾಥಮಿಕ ಶಾಲೆಗಳಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ

ಪ್ರಾಥಮಿಕ ಶಾಲೆಗಳಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.ಎಂದರು.  ಪ್ರತಿ ಮಗುವೂ ಶಾಲೆಯಲ್ಲಿ ಮತ್ತು ಉತ್ತಮ ಕಲಿಕೆಯೊಂದಿಗೆ ಎಂಬ ಘೋಷಣ ನೀತಿಯನ್ನು ಅಳವಡಿಸಿಕೊಂಡಿದ್ದು , ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ . 1 ನೇ ತರಗತಿಯಿಂದ 3 ರವರೆಗೆ ನಲಿಕಲಿ ಪದ್ಧತಿ ಅಳವಡಿಸಲಾಗಿದೆ.  ಒಂದನೇ ತರಗತಿಯಿಂದಲೇ ಕನ್ನಡ ವಿಷಯವನ್ನಾಗಿ ಕಲಿಸಲು ಅವಕಾಶ ಕಲ್ಪಿಸಲಾಗಿದೆ. ಹಂತ ಹಂತವಾಗಿ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಯಿತು ಎಂದರು.


ಒಟ್ಟು ನೇಮಕಾತಿ ಮಾಡುವ ಹುದ್ದೆಗಳು!

ಒಟ್ಟು 2500 ಸಹಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು.


EmoticonEmoticon

 

Start typing and press Enter to search