ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ಪ್ರೋತ್ಸಾಹ ಧನ!
2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕಗಳನ್ನು ಪಡೆದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ತಲಾ 10 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 2,307 ಮಕ್ಕಳು ಪ್ರೋತ್ಸಾಹಧನ ಪಡೆಯಲು ಅರ್ಹರಿರುತ್ತಾರೆ..
ರಾಜ್ಯದ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಿಸುವ ಯೋಜನೆ ಜಾರಿ!
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕೆಎಸ್‌ಆರ್‌ಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಪಾಸ್‌ಗಳನ್ನು ವಿತರಿಸಲಾಗುತ್ತಿದೆ.
ಪಾಸ್ ನಿಂದ ಪ್ರಯಾಣದ ವ್ಯಾಪ್ತಿ!
ಪಾಸ್ ಪಡೆದ ಕಾರ್ಮಿಕರು ತಮ್ಮ ವಾಸ ಸ್ಥಳದಿಂದ 40 ಕಿ.ಮೀ ವ್ಯಾಪ್ತಿಯೊಳಗೆ ಪ್ರಯಾಣ ಮಾಡಬಹುದು.
ಪಾಸ್‌ನ ಮಾನ್ಯತಾ ಅವಧಿ
ಪ್ರತಿ ಬಸ್ ಪಾಸ್‌ನ ಮಾನ್ಯತಾ ಅವಧಿ 3 ತಿಂಗಳು ಇರಲಿದೆ!
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ಪ್ರೋತ್ಸಾಹ ಧನ!
2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕಗಳನ್ನು ಪಡೆದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ತಲಾ 10 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 2,307 ಮಕ್ಕಳು ಪ್ರೋತ್ಸಾಹಧನ ಪಡೆಯಲು ಅರ್ಹರಿರುತ್ತಾರೆ.
ಕಟ್ಟಡ ಕಾರ್ಮಿಕರ ಬಸ್ ಪಾಸ್ ಯೋಜನೆಯ ರೂಪರೇಷೆಗಳು :
1. ಈ ವಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಇಡಿಸಿಎಸ್ ರವರಿಂದ ವಿತರಣೆ ಮಾಡಲಾಗುವುದು.
2. ಈ ಪಾಸುಗಳನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಸರ್ಕಾರದ ಇಡಿಸಿಎಸ್ ಇಲಾಖೆಯ ಸೇವಾಸಿಂದು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲ ವಿತರಣೆ ಮಾಡಲು ಕ್ರಮವಹಿಸುತ್ತದೆ.
3. ಮಂಡಳಿಯ ನೋಂದಾಯಿತ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೊಂದಣಿಯಾಗಿದ್ದರೂ ಸಹ ಅವರು ಇಚ್ಚಿಸುವ ಪಾಸಿನಲ್ಲಿ ನಮೂದಿಸಲಾಗುವ ಪ್ರಾರಂಭಿಕ ಸ್ಥಳದಿಂದ ( ಕರಾರಸಾ ನಿಗಮ , ವಾಕರಸಾಸಂಸ್ಥೆ ಹಾಗೂ ಸಕರಸಾ ನಿಗಮಗಳ ವ್ಯಾಪ್ತಿಯಲ್ಲ ) ಅಂದರೆ ಪ್ರಾರಂಭಿಕ ಸ್ಥಳದಿಂದ 07 ಹಂತಗಳವರೆಗೆ ( ಗರಿಷ್ಠ 45 ಕಿ.ಮೀ ) ಉಚಿತವಾಗಿ ನಿಗಮದ ಬಸ್ತುಗಳು ಪ್ರಯಾಣಿಸಲು ಅವಕಾಶವಿರುತ್ತದೆ.
4. ಇಡಿಸಿಎಸ್ ಇಲಾಖೆಯ / ಸೇವಾಸಿಂಧು ಸೋರ್ಟಲ್‌ರವರು ರಾಜ್ಯಾದ್ಯಂತ ಕರ್ನಾಟಕ ಒನ್ / ಗ್ರಾಮಸೇವಾ ಒನ್ ಸೆಂಟರ್‌ಗಳ ಮೂಲಕ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕರುಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಕ್ರಮವಹಿಸುತ್ತಾರೆ .
5. ಕರಾರಸಾನಿಗಮ , ವಾಕರಸಾಸಂಸ್ಥೆ ಹಾಗೂ ಕಕರಸನಿಗಮಗಳ ಲೋಗೋ / ಹೆಸರು ಇರುವ ಸ್ಮಾರ್ಟ್‌ಕಾರ್ಡ್ ( With QR code ) ಮಾದರಿಯ ತಂತ್ರಾಂಶದ ಮೂಲಕ ವಿತರಣೆ ಮಾಡಲಾಗುವುದು , ಅಡಕಗೊಳಿಸಿದೆ )
ಬಸ್‌ಪಾಸ್‌ಗಳನ್ನು ಸೇವಾಸಿಂದು ( ನಮೂನೆಯ ಮಾದರಿಯನ್ನು ಕಟ್ಟಡ ಕಾರ್ಮಿಕರ ಬಸ್ ಪಾಸುದಾರರ ಪ್ರಯಾಣ ಸೌಲಭ್ಯ ಹಾಗೂ ಪಾಸಿನ ಚಾಲ್ತಿ ಅವಧಿ :
1. ಈ ಪಾಸುದಾರರು ಪಾಸಿನಲ್ಲಿ ನಮೂದಿಸಿದ ಪ್ರಾರಂಭದ ಬಸ್ ನಿಲ್ದಾಣ / ಸ್ಥಳದಿಂದ 07 ಹಂತಗಳವರೆಗೆ ಮಾತ್ರ ( 45 ಕಿ.ಮೀ ವ್ಯಾಪ್ತಿಯೊಳಗೆ ಬರುವ ಎಲ್ಲಾ ಮಾರ್ಗಗಳಲ್ಲ ) ಪ್ರಯಾಣಿಸಬಹುದಾಗಿರುತ್ತದೆ . ಹಾಲ ಪ್ರತಿ ಪಾಸಿಗೆ ಮಾಸಿಕ ರೂ .1400 / - ದರ ನಿಗದಿಪಡಿಸಲಾಗಿದ್ದು , ಮುಂದಿನ ದಿನಗಳಲ್ಲಿ ಬಸ್ ಪ್ರಯಾಣ ದರ ಪರಿಷ್ಕರಿಸಿದಲ್ಲಿ ಅದರಂತ ದರಗಳು ಪರಿಷ್ಕರಣೆಗೊಳ್ಳದೆ.
2. ಈ ಪಾಸುದಾರರು ಪಾಸು ವಿತರಣಾ ಸ್ಥಳದಲ್ಲಿ ಆಚರಣಿಯ ದೂರಮಿತಿಗೆ ಒಳಪಟ್ಟು ಮೂರು ಸಾರಿಗೆ ನಿಗಮಗಳ ( ಕರಾರಸಾನಿಗಮ , ವಾಕರಸಾಸಂಸ್ಥೆ ಹಾಗೂ ಕಕರಸನಿಗಮಗಳ ) ನಗರ , ಸಾಮನ್ಯ / ಹೊರವಲಯ ಹಾಗೂ ವೇಗದೂತ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ.
3. ವಾಸಿನ ಮಾನ್ಯತಾ ಅವಧಿ ಮೂರು ತಿಂಗಳು , ಮೂರು ತಿಂಗಳ ಚಾಲ್ತಿ ಅವಧಿ ಮುಕ್ತಾಯವಾದ ನಂತರ ಮರು ಅವಧಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ಸೇವಾಸಿಂಧು ಬೋರ್ಟಲ್ ಮೂಲಕ ಪಾಸು ಪಡೆಯಲು ಅವಕಾಶ ಕಲ್ಪಸಲಾಗಿರುತ್ತದೆ.
ನಿಗಮದ ಸಿಬ್ಬಂದಿಯು ನಿರ್ವಹಿಸಬೇಕಾದ ಪರಿಶೀಲನಾ ಕಾರ್ಯಗಳು :
1. ಈ ಪಾಸಿನ ವಿನ್ಯಾಸವನ್ನು ಕರ್ನಾಟಕ ರಾಜ್ಯ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ರಸ್ತೆ ಸಾರಿಗೆ ನಿಗಮಗಳು ಜಂಟಯಾಗಿ ನಿರ್ವಹಿಸಿದ್ದು , ಪಾಸಿನ ನಮೂನೆಯ ಮಾದರಿಯನ್ನು ಅನುಬಂಧದಲ್ಲಿ ಅಡಕಗೊಳಿಸಿದೆ.
2. ಈ ಪಾಸುದಾರರು ಪ್ರಯಾಣಿಸುವಾಗ ಚಾಲನಾ ಸಿಬ್ಬಂದಿಗಳಿಗೆ / ತನಿಖಾಧಿಕಾರಿಗಳು ಕೇಳದಾಗ ಪಾಸನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ.
3. ಚಾಲನಾ ಸಿಬ್ಬಂದಿಗಳು ರಾಸುಗಳ ಮಾನ್ಯತಾ ಅವಧಿಯನ್ನು ಕಡ್ಡಾಯವಾಗಿ ಪರಿಶೀಲಸುವುದು.
4. ಚಾಲನಾ ಸಿಬ್ಬಂದಿಗಳು ಹಾಗೂ ತನಿ ಸಿಬ್ಬಂದಿಗಳು ನಮೂನೆಯ ಮಾದರಿಯನ್ನು ಗಮನದಲ್ಲಿರಿಸಿ ಪ್ರಯಾಣದ ಸಂದರ್ಭದಲ್ಲಿ ಪರಿಶೀಲನೆಗೊಳಪಡಿಸುವುದು.
ಪಾಸ್ ನವೀಕರಣ ವಿಧಾನ
1. ಈ ಪಾಸುಗಳ ವಿತರಣೆ , ನಿರ್ವಹಣೆ ಹಾಗೂ ಪಾಸಿನ ನವೀಕರಣ ಕೆಲಸವನ್ನು ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯವರು ನಿರ್ವಹಿಸಲಿದ್ದಾರೆ.
2. ಐಸು ನವೀಕರಣದ ಸಮಯದಲ್ಲಿ ಕಾರ್ಮಿಕ ಕಲ್ಯಾಣ ಇಲಾಖೆಯವರು ನೀಡಿರುವ ಗುರುತಿನ ಚೀಟಿಯ ನವೀಕರಣವಾಗಿರುವುದನ್ನು ಕಡ್ಡಾಯವಾಗಿ ಪರಿಶೀಲನೆಗೊಳಪಡಿಸಿ , ಪಾಸನ್ನು ಮುಂದಿನ ನಿಗದಿತ ಅವಧಿಗೆ ಸೇವಾಸಿಂದು ಇಲಾಖೆಯವರು ನವೀಕರಣ ಮಾಡಲಿದ್ದಾರೆ.
ನಕಲು ಪಾಸು ವಿತರಣಾ ವಿಧಾನ :
1. ಫಲಾನುಭವಿಯು ಬಸ್‌ಪಾಸ್ ಕಳೆದುಕೊಂಡಲ್ಲ ಒಮ್ಮೆಗೆ ಮಾತ್ರ ಸಂಬಂಧಪಟ್ಟ ಕರ್ನಾಟಕ 01 ಕೇಂದ್ರಕ್ಕೆ ತರ ಮನವಿ ಸಲ್ಲಿಸಿದಾಗ ತಂತ್ರಾಂಶವನ್ನು ಪರಿಶೀಲಸಿ ಬಸ್‌ಪಾಸ್ ಅವಧಿಗೆ
ಸ್ಟಾರ್ಟ್‌ಕಾರ್ಡ್ ಮುದ್ರಣದ ವೆಚ್ಚವನ್ನು ಮಾತ್ರ ಪಡೆದು ಹೊಸದಾಗಿ ಪಾನ್‌ನ್ನು ಸೇವಾಸಿಂಧು ಸಂಸ್ಥೆಯವರು ನೀಡದಿದ್ದಾರೆ .
ಆಚರಣಾ ವಿಭಾಗ / ಘಟಕದವರ ಜವಾಬ್ದಾರಿಗಳು :
1. ಈ ಪಾಸು ವ್ಯವಸ್ಥೆಯ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಅಗತ್ಯ ತಿಳುವಳಿಕೆ ನೀಡುವುದು.
2. ನಿಗದಿತ ದೂರ / ಮಿತಿಯೊಳಗೆ ( ಪಾಸ್‌ನಲ್ಲಿ ನಮೂದಿಸಿದ ಸ್ಥಳದಿಂದ 45 ಕಿ.ಮೀ ವರೆಗಿನ ಎಲ್ಲಾ ಮಾರ್ಗಗಳಲ್ಲಿ ಮಾತ್ರ ಮಾತ್ರ ಪ್ರಯಾಣಿಸಲು ಅವಕಾಶ ನೀಡುವುದು , ಮಿತಿಯ ಹೊರತು ಪಾಸುದಾರರು ಪ್ರಯಾಣಿಸಿದಲ್ಲಿ ನಿಯಮಾವಳಗಳನ್ವಯ ಏಕೆಟ್ ವಿತರಿಸಲು ಚಾಲನಾ ಸಿಬ್ಬಂದಿಗಳಿಗೆ ಅಗತ್ಯ ಸೂಚನೆ ನೀಡುವುದು
3. ಪಾಸುಗಳು ನಿಗದಿತ ದೂರ / ಮಿತಿಗಿಂತ ಹೆಚ್ಚಿನ ದೂರಕ್ಕೆ ಪ್ರಯಾಣಿಸಲು ಚಾಲನಾ ಸಿಬ್ಬಂದಿಗಳು ಅವಕಾಶ ನೀಡುವಂತಿಲ್ಲ. ಇಂತಹ ಪ್ರಕರಣಗಳು ಕಂಡುಬಂದು ವಾಸುದಾರರಿಗೆ ಹೆಚ್ಚಿನ ಪ್ರಯಾಣ ದೂರಕ್ಕೆ ಸಂಬಂಧಿಸಿದ ದರದ ಟಿಕೆಟ್ ವಿತರಿಸುವುದು. ದುರುಪಯೋಗವಾಗುತ್ತಿರುವುದು ಕಂಡುಬಂದಲ್ಲ ಚಾಲನಾ ಸಿಬ್ಬಂದಿಗಳು / ಹನಿಖಾಧಿಕಾರಿಗಳು ವಾಸನ್ನು ವಶಪಡಿಸಿಕೊಂಡು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಕಳುಹಿಸುವುದು.
ಈ ಪಾಸು ವ್ಯವಸ್ಥೆ ನೂತನವಾಗಿ ಅನುಷ್ಠಾನಗೊಳಿಸಿರುವು ಯೋಜನೆಯಾಗಿರುವುದರಿಂದ ಯಾವುದೇ ಲೋಪಗಳಗೆ ಅವಕಾಶ ನೀಡದಂತೆ ಪಾಸುಗಳನ್ನು ನಿಗಮದ ಬಸ್ಸುಗಳು ಸಿಬ್ಬಂದಿಗಳು ಸೂಕ್ಷ್ಮವಾಗಿ ಪರಿಶೀಲಸಿ ಕರ್ತವ್ಯ ಮಾನ್ಯ ನಿರ್ವಹಿಸಲು ಅಗತ್ಯ ತಿಳುವಳಿಕೆ ನೀಡುವುದು.
EmoticonEmoticon