SA-1 Time Table for Class 1 to 9!

- September 16, 2022

1 ರಿಂದ 9 ನೇ ತರಗತಿವರೆಗೆ SA -1 ವೇಳಾ ಪಟ್ಟಿ!


1 ರಿಂದ 5 ನೇ ತರಗತಿಗಳಿಗೆ 20 ಲಿಖಿತ + 20 ಮೌಖಿಕ ಒಟ್ಟು 40 ಅಂಕಗಳಿಗೆ ಪರೀಕ್ಷೆ ನಡೆಸುವುದು.

ಇಂಗ್ಲೀಷ್ ಭಾಷೆಗೆ 10 ಲಿಖಿತ + 30 ಮೌಖಿಕ ಒಟ್ಟು 40 ಅಂಕಗಳಿಗೆ ಪರೀಕ್ಷೆ ನಡೆಸುವುದು ಹಾಗೂ 20 ಅಂಕಗಳಿಗೆ ಪರಿವರ್ತಿಸುವುದು.

6 ರಿಂದ 8 ನೇ ತರಗತಿಗಳಿಗೆ 30 ಲಿಖಿತ + 10 ಮೌಖಿಕ ಒಟ್ಟು 40 ಅಂಕಗಳಿಗೆ ಪರೀಕ್ಷೆ ನಡೆಸುವುದು.

ತರಗತಿ / ವಿಷಯ ಶಿಕ್ಷಕರು 1 ರಿಂದ 3 ನೇ ತರಗತಿಗೆ ನಲಿ ಕಲಿ ಮಾದರಿಯಲ್ಲಿಯೂ ಹಾಗೂ 4 ರಿಂದ 9ನೇ ತರಗತಿಯವರೆಗೆ ಕಲಿಕಾ ಫಲಗಳ ಗಳಿಕೆ ಆಧರಿಸಿ ಪ್ರಶ್ನೆ ಪತ್ರಿಕೆಯನ್ನು ಸಿದ್ದಪಡಿಸಿ ಮುಖ್ಯ ಶಿಕ್ಷಕರಿಂದ ಧೃಢೀಕರಿಸಿಕೊಂಡು ಪರೀಕ್ಷೆ ನಡೆಸಲು ತಿಳಿಸಿದೆ.

 2022-23ನೇ ಸಾಲಿನಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನ ಜಾರಿಯಲ್ಲಿರುವ ಕಾರಣ ಕಲಿಕಾ ಹಾಳೆಗಳಲ್ಲಿ ನಿಗಧಿಪಡಿಸಿದ ಒಟ್ಟು ಕಲಿವಿನ ಫಲದ ಸಂಖ್ಯೆಗಳ ಶೇ .50 ರಷ್ಟು ಕಲಿಕಾ ಫಲಗಳಿಗೆ ಲಿಖಿತ ಪರೀಕ್ಷೆಗಳನ್ನು ನಡೆಸುವುದು . ಲಿಖಿತ ಪರೀಕ್ಷೆಯ ಪ್ರಶ್ನೆಗಳು ಸಾಮರ್ಥ / ಕಲಿಕಾ ಫಲಗಳ ಗಳಿಕೆ ಪರೀಕ್ಷಿಸುವಂತಿರಬೇಕು.

17-10-2022 ರಿಂದ 25-11-2022ರ ಒಳಗೆ 1 ರಿಂದ 9 ನೇ ತರಗತಿಗಳಿಗೆ SA-1 ಪರೀಕ್ಷೆ ನಡೆಸುವುದು!



ಮಾನ್ಯ ಆಯುಕ್ತರ ಸುತ್ತೋಲೆಯನ್ವಯ ದಿನಾಂಕ : 03-10-2022 ರಿಂದ 16-10-2022 ರವರೆಗೆ ದಸರಾ ರಜೆ ನೀಡಲು ಸೂಚಿಸಿರುವ ಹಿನ್ನೆಲೆಯಲ್ಲಿ ಸದರಿ ಅವಧಿಯಲ್ಲಿ ಸಂಕಲನಾತ್ಮಕ ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ವಿದ್ಯಾಥಿಗಳಿಗೆ ತಿಳಿಸುವುದು. ದಿನಾಂಕ : 17-10-2022 ರಿಂದ 25-11-2022ರ ಒಳಗೆ 1 ರಿಂದ 9 ನೇ ತರಗತಿಗಳಿಗೆ ಸಂಕಲನಾತ್ಮಕ ಮೌಲ್ಯಾಂಕ ( ಎಸ್.ಎ -1 ) ನಿರ್ವಹಿಸಿ ಮೌಲ್ಯಾಂಕದ ವಿಶ್ಲೇಷಣೆ ಮಾಡಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಪ್ರಗತಿಯ ವಿವರವನ್ನು ಪೋಷಕರಿಗೆ ನೀಡಲು ಸೂಚಿಸಿದೆ.



SSLC ಅರ್ಧವಾರ್ಷಿಕ ಪರೀಕ್ಷೆ ವೇಳಾ ಪಟ್ಟಿ! 

2022-23ನೇ ಸಾಲಿನ 10 ನೇ ತರಗತಿ ಅರ್ಧ ವಾರ್ಷಿಕ ಪರೀಕ್ಷೆ ವೇಳಾಪತ್ರಿಕೆ.

2022-23ನೇ ಸಾಲಿನ 10 ನೇ ತರಗತಿ ಅರ್ಧ ವಾರ್ಷಿಕ ಪರೀಕ್ಷೆಯನ್ನು ಜಿಲ್ಲೆಯ ಎಲ್ಲಾ ಸರ್ಕಾರಿ , ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಕೆಳಕಂಡ ವೇಳಾಪಟ್ಟಿಯಂತೆ ಲಿಖಿತ ಪರೀಕ್ಷೆಯನ್ನು ನಡೆಸಲು ಸೂಚಿಸಿದೆ.




9 ನೇ ತರಗತಿಗೆ 10 ನೇ ತರಗತಿಯ ಮಾದರಿಯಲ್ಲಿ ವಟೆಜ್ ನೀಡಿ ಪ್ರಥಮ ಭಾಷೆಗೆ 100 ಅಂಕಗಳಿಗೆ ಹಾಗೂ ಉಳಿದ ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ನಡೆಸುವುದು.




EmoticonEmoticon

 

Start typing and press Enter to search